ಈ ನಾಟಕ ಪ್ರದರ್ಶನದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿರುವ ರಾಮಯ್ಯ ಈ ಕೆಳಗಿನ ಪದ್ಯವನ್ನು ಬರೆದಿದ್ದಾರೆ
ಆಹಾ ಎಂಥಾ ಪಾಠವಯ್ಯಾ..
ಉಳಿವಿನ ಕೊನೆಯರಸಿ ಬಂದರೆ
ಅರಸಿಯರ ಅಂತಃಕರಣ ಕಾಣದೆ..
ಅರಸರ ಅರಸಹೀನತನ ಕಾಣದೆ..
ಸಿರಿತನಕ ಗರ ಬಡಿಯದಿರಲಿ ಎಂದು ಬಯಸಿದೆ
ಯಾವ ಮನೆಬಾಗಲಿಗೆ ಹೋಗದಿರುವಂತೆ
ಯಾರ ಎದೆಕದವನ್ನು ತಟ್ಟದಿರುವಂತೆ
ಎಚ್ಚರಿಸಿತು ಒಳದನಿ
ಥ್ಯಾಂಕ್ಸ್ ಬಂಧುಗಳೇ.. ಕೈಹಿಡಿದು ನಡೆಸುವ ಶಕ್ತಯಿರುವವರೇ...
ಶಕ್ತಿಹೀನನಾಗಿದ್ದರೂ ನಿಮ್ಮೊಳಗಿನ ಶಕ್ತಿ ಇರುವವನೊಬ್ಬ
ಕೈಹಿಡಿಯುವವನೆಂಬ ನಂಬಿಕೆಯೊಂದಿದೆ ನನಗೆ
ನಿಮ್ಮ ಎದೆಕದದಾಚೆಗಿನ ಒಳಗೆ...
-ಕೋಟಿಗಾನಹಳ್ಳಿ ರಾಮಯ್ಯ

No comments:
Post a Comment