ಬಂಧುಗಳೇ.. 'ಆದಿಮ ಜೀವ ಕಲಾಶಾಲೆ' ಕೋಟಿಗಾನಹಳ್ಳಿ ರಾಮಯ್ಯನವರ ಕನಸುಗಾರಿಕೆಯ ಚೆಲುವು. ಆ ಮೂಲಕ ಅವರು ಕಾಣಲು ಹವಣಿಸುತ್ತಿರುವ ಲೋಕವನ್ನು ಮತ್ತದರ ಸೌಂದರ್ಯವನ್ನು ನಾವು ಅವರ ಜತೆಗಿದ್ದುಕೊಂಡೇ ಕಾಣಲು ಸಾಧ್ಯ. ರಾಮಯ್ಯನವರು ಕಳೆದ ನಾಲ್ಕೈದು ವರ್ಷಗಳಿಂದ 'ಆದಿಮ'ದ ಮೂಲಕ ನಮ್ಮೆದುರು ನಿಂತು ತಮ್ಮ ಆರ್ದ್ರ ಹೃದಯವಂತಿಕೆಯ ಪ್ರೇಮದ ಬಾಹುಗಳನ್ನು ಚಾಚಿರುವುದನ್ನು ಸುತ್ತಲಿನ ಹಿಪೋಕ್ರಸಿಗಳ ನಡುವೆ ನಾವೆಲ್ಲರೂ ಕಾಣದಾಗಿದ್ದೇವೆ. ಅವರು ಇತ್ತೀಚೆಗೆ ಒಡನಾಡುತ್ತಿರುವ ಕಾವ್ಯ ಅವರ ಕನಸುಗಾರಿಕೆಗೆ ಪ್ರಬಲ ಭಿತ್ತಿಯನ್ನು ಒದಗಿಸಿಕೊಟ್ಟಿದೆ. ಆ ಕನಸುಗಳಲ್ಲಿ ನಾವೂ ಪಾಲುದಾರರಾಗಲು ಇಲ್ಲೊಂದು ಪ್ರಯತ್ನ ನಡೆದಿದೆ. ಅದು ಈ ಬ್ಲಾಗ್... ಇಲ್ಲಿ ನಿಮ್ಮ ಎಲ್ಲ ಮಾತು, ಹಾಡು, ಹರಟೆ, ತಲ್ಲಣ, ಪರಿತಾಪ, ಸಿಟ್ಟು, ಸಿಗ್ಗು, ಪ್ರೀತಿ... ಎಲ್ಲದಕ್ಕೂ ಜಾಗವಿದೆ. ಬನ್ನಿ 'ಆದಿಮ ಲಿವಿಂಗ್ ಟೈಮ್ಸ್'ನ ಜತೆಗೂಡಿ.
-ನಿಮ್ಮ ನಿರೀಕ್ಷೆಯಲ್ಲಿ
ಹುಲಿಕುಂಟೆ ಮೂರ್ತಿ
No comments:
Post a Comment